ಬಾ ಬಾ ಎಂದು ಬೇಡಿದೆ
ಬರಲಿಲ್ಲ ಮಳೆ ಈ ಕಡೆ
ಎಂದೆ ನಾ ಬಾ ಬಾ ಮಳೆ
ಸೇರಿಹುದು ನನ್ನ ವಾಹನದ ಮೇಲೆ ಕೊಳೆ
ಬಂದು ನೀ ಅದರ ತೊಳೆ
ಎಂದಿತು ಅದು ಹುಡುಕಿಕೊ ಯಾವುದಾದರು ಹೊಳೆ
ಬರಲಿಲ್ಲ ಮಳೆ ಈ ಕಡೆ
ಎಂದೆ ನಾ ಬಾ ಬಾ ಮಳೆ
ಬಂದು ತಂಪನ್ನು ಇತ್ತ ಸೆಳೆ
ಬೆಂದು ಒಣಗುತ್ತಿದೆ ಎಲ್ಲ ಬೆಳೆ
ಎಂದಿತು ಅದು ಸಾಕು ಮಾಡು ನಿನ್ನ ರಗಳೆ
ಬರಲಿಲ್ಲ ಮಳೆ ಈ ಕಡೆ
ಎಂದೆ ನಾ ಬಾ ಬಾ ಮಳೆ
ಕಾಣು ಎಲ್ಲರ ಮೊಗದಿ ಕಳೆ
ತಟ್ಟುವೆ ನಿನಗೆ ನಾ ಚಪ್ಪಾಳೆ
ಎಂದಿತು ಅದು ಬಿಡಬೇಡ ನೀ ಬೊಗಳೆ
ಬರಲಿಲ್ಲ ಮಳೆ ಈ ಕಡೆ
3 comments:
Hey Raghu, Sooper kavithe...
Thanx Veena
ತುಂಬಾ ಚೆನ್ನಾಗಿದೆ ,ವಿಭಿನ್ನವಾಗಿದೆ ...ನಿನ್ನ ಬೇರೆ ಬರವಣಿಗೆ ಗಳಿದ್ದರೆ ಲಿಂಕ್ ಕಳಿಸು .ಬೇರೆ ಕಡೆ ಮಳೆಯಾಗಿರಬಹುದು ..ಈ ಕಡೆ ಇಲ್ಲ ಎಂಬುದನ್ನು ನಿನ್ನ ಮತ್ತು ಮಳೆಯ ಮಾತುಕಥೆಯಾಗಿಸಿದ್ದೀಯ ..ಅಭಿನಂದನೆಗಳು .
Post a Comment